== ಬಜೆಟ್ ೨೦೧೭-೧೮ == 15 , 2017; 24 ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017-18 ಸಾಲಿನ ಬಜೆಟ್‍ನ್ನು ೧೫-೩-೨೦೧೭ರ ಬೆಳಿಗ್ಗೆ 11:33ಮಂಡನೆ ಮಾಡಿದರು. ಅವರು ಬಜೆಟ್‍ನ್ನು ಮಂಡನೆ ಮಾಡುವಾಗ ನಮ್ಮದು ಸರ್ವರನ್ನು ಒಳಗೊಂಡ ಸರ್ವೋದಯ ಅಭಿವೃದ್ಧಿ ಮಾದರಿ ಸರ್ಕಾರ. ಅಭಿವೃದ್ಧಿಯ ಪಥವೇ ಸರ್ಕಾರದ ಸಾಧನೆಯಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ 12ನೇ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ದಾಖಲೆ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿದೆ. ಹೆಗಡೆ ಅವರು ದಿವಂಗತ ಎಸ್ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ವೇಳೆ ಆರು ಬಾರಿ ಮತ್ತು ತಾವೇ ಮುಖ್ಯಮಂತ್ರಿಯಾಗಿದ್ದಾಗ 7 ಬಾರಿ ಬಜೆಟ್ ಮಂಡಿಸಿದ್ದು ಒಟ್ಟಾರೆ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಇನ್ನು ಎಂ.ವೈ ಘೋರ್ಪಡೆ ಅವರು ಏಳು ಬಾರಿ ಬಜೆಟ್ ಮಂಡಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆರು ಬಾರಿ ಬಜೆಟ್ ಮಂಡಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. == ಬಜೆಟ್ ಸಾರಾಶ == ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಮಂಡಲದ ಅಧಿವೇಶನದಲ್ಲಿ 2017-18ನೇ ಸಾಲಿನ 1,86, 561 ಕೋಟಿ ರೂ. ಗಾತ್ರದ "ಜನಪ್ರಿಯ" ಬಜೆಟ್ (ಸಿದ್ದು ಲೆಕ್ಕಾಚಾರ;ಬಜೆಟ್ ಹೈಲೈಟ್ಸ್) ಮಂಡಿಸಿದ್ದಾರೆ. ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಘಟನೆಯ ನಡುವೆಯೂ ಈ ಬಾರಿಯೂ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಮಾಡದೆ ಶೂನ್ಯ ಬಡ್ಡಿದರದಲ್ಲಿ ಶೇ.3 ಲಕ್ಷದವರೆಗೆ ಸಾಲ ಸೌಲಭ್ಯ ಮುಂದುವರಿಸಲಾಗಿದೆ. ಬೆಂಗಳೂರಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲೇ ನಮ್ಮ ಕ್ಯಾಂಟೀನ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಮೆಟ್ರೋ, ಬಿಬಿಎಂಪಿ ರಸ್ತೆಗಳಿಗೆ ಬಂಪರ್ ಕೊಡುಗೆ. ಬೆಂಗಳೂರಿನ ವಾಹನ ದಟ್ಟಣೆ ನಿಯಂತ್ರಿಸಲು ಕ್ರಮ, ಬೆಂಗಳೂರು ವನ್ ಮಾದರಿಯಲ್ಲಿ ಕರ್ನಾಟಕ ವನ್ ಜಾರಿ, 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ, ಕೃಷಿ, ವಿದ್ಯುತ್, ನೀರಾವರಿ, ಶಿಕ್ಷಣ,ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಕನ್ನಡ ಚಿತ್ರರಂಗ, ಮೀನುಗಾರಿಕೆ, ಮಹಿಳೆಯರು, ವೃದ್ಧರಿಗೆ ಬಜೆಟ್ ನಲ್ಲಿ ಆದ್ಯತೆ ಕೊಡಲಾಗಿದೆ. ರಾಯಚೂರಿನಲ್ಲಿ ವಿವಿ ಸ್ಥಾಪನೆ...ಹೀಗೆ ಹತ್ತು ಹಲವು ಯೋಜನೆಗಳ ಕೊಡುಗೆ ನೀಡಿರುವ ಸಿದ್ದರಾಮಯ್ಯ ಇದು ಅಭಿವೃದ್ಧಿ ಪರ ಬಜೆಟ್ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ ಬಿಜೆಪಿ ಇದು ರೈತ ವಿರೋಧಿ ಬಜೆಟ್ ಎಂದು ಟೀಕಿಸಿದೆ. ಏತನ್ಮಧ್ಯೆ ರೈತರ ಸಾಲ ಮನ್ನಾ ಕುರಿತಂತೆ ಮೊದಲು ಕೇಂದ್ರ ರೈತರ ಸಾಲ ಮನ್ನಾ ಮಾಡಲಿ, ಈ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ದೆಹಲಿಯಲ್ಲಿ ಧರಣಿ ನಡೆಸಿ ಒತ್ತಡ ಹೇರಲಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ. == ರಾಜ್ಯ ಬಜೆಟ್‌ನಲ್ಲಿ ಇಲಾಖೆಗಳಿಗೆ ಮೀಸಲಿಟ್ಟ ಹಣದ ವಿವರ == 15 , 2017; ಒಟ್ಟು ಬಜೆಟ್‌ ಗಾತ್ರ ರೂ.1,86,561 ಕೋಟಿ. == ಬಜೆಟ್ಟನ ವಿವರ == === ತೆರಿಗೆ ಪ್ರಸ್ತಾವನೆಗಳು === ಸಿರಿಧಾನ್ಯಗಳಾದ ನವಣೆ, ಸಾಮೆ ಹಿಟ್ಟುಗಳಿಗೆ ತೆರಿಗೆ ವಿನಾಯಿತಿ; ==== ಸರಕು ಮತ್ತು ಸೇವಾ ತೆರಿಗೆ ==== ಸರಕು ಮತ್ತು ಸೇವಾ ತೆರಿಗೆಯನ್ನು 01ನೇ ಜುಲೈ 2017 ರಿಂದ ದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಕರ್ನಾಟಕವು ಸರಕು ಮತ್ತು ಸೇವಾ ತೆರಿಗೆಯಲ್ಲಿ ದೇಶದಲ್ಲಿಯೇ ಅತೀ ಹೆಚ್ಚಿನ ಮಟ್ಟದ ಸ್ಥಿತ್ಯಂತರದ ಪ್ರಗತಿಯನ್ನು ಸಾಧಿಸಿದೆ. ಸರಕು ಮತ್ತು ಸೇವಾ ತೆರಿಗೆಯ ಕುರಿತು ಅರಿವು ಮೂಡಿಸಲು ಕರದಾತರು ಹಾಗೂ ವೃತ್ತಿನಿರತರೊಂದಿಗೆ ಸಂಹವನಕ್ಕಾಗಿ 100 ಕ್ಕೂಹೆಚ್ಚು ಕಾರ್ಯಾಗಾರಗಳ ಹಾಗೂ ರೋಡ್ ಶೋಗಳ ಮೂಲಕ ಬೃಹತ್ ಪ್ರಮಾಣದ ಸಂಪರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಾಕಷ್ಟು ಸಾಮರ್ಥ್ಯ ಸಂವರ್ಧನೆಗಾಗಿ ಇಲಾಖೆಯ 3000ಕ್ಕೂ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ==== ಮೌಲ್ಯವರ್ಧಿತ ತೆರಿಗೆ ==== ಪರಿಹಾರಗಳು ಮತ್ತು ಸುಧಾರಣಾ ಕ್ರಮಗಳು ಭತ್ತ, ಅಕ್ಕಿ, ಗೋಧಿ, ಬೇಳೆ ಕಾಳುಗಳು ಹಾಗೂ ಅಕ್ಕಿ, ರಾಗಿರೈಸ್ (ಸಂಸ್ಕರಿಸಿದ ರಾಗಿ) ಮತ್ತು ಗೋಧಿ ಪದಾರ್ಥಗಳ ಮೇಲಿನ ತೆರಿಗೆಯ ವಿನಾಯಿತಿಗೊಳಿಸಲಾಗಿದೆ. ಸಿರಿಧಾನ್ಯಗಳಾದ ನವಣೆ, ಸಾಮೆ, ಆರಕ ಮತ್ತು ಬರಗು ಇವುಗಳ ಹಿಟ್ಟುಗಳನ್ನು ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ. ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿಯ ಸಿಪ್ಪೆಯ ಮೇಲಿನ ತೆರಿಗೆಯನ್ನು ವಿನಾಯಿತಿಗೊಳಿಸಲಾಗಿದೆ. ==== ಆಡಳಿತಾತ್ಮಕ ಕ್ರಮಗಳು ==== 2003ರ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆಯ ಪ್ರಕರಣ 40ಕ್ಕೆ ತಿದ್ದುಪಡಿ ಮಾಡುವ ಮೂಲಕ 2012-13 ಹಾಗೂ 2013-14ರ ತೆರಿಗೆ ಅವಧಿಗಳಿಗೆ ಸಂಬಂಧಿಸಿದ ಕರನಿರ್ಧರಣೆ ಅಥವಾ ಮರುಕರ ನಿರ್ಧರಣೆಗಳನ್ನು ಅಂತಿಮಗೊಳಿಸಲು ಇದ್ದ ಟಡೆರತಯುಇಉಯತರೆಡೆಒಂದು ವರ್ಷ ವಿಸ್ತರಿಸಲಾಗಿದೆ. ಪ್ರಕರಣ 40 ಕ್ಕೆ ತಿದ್ದುಪಡಿ ಮಾಡುವ ಮೂಲಕ ಕರನಿರ್ಧರಣೆ ಅಥವಾ ಮರುಕರನಿರ್ಧರಣೆಗೆ ಕಾಲಮಿತಿಯನ್ನು ಪರಿಗಣಿಸುವಾಗ ಮರುಪರಿಶೀಲನಾ ನಡಾವಳಿಗಳನ್ನು ವಿಲೇ ಮಾಡಲು ತೆಗೆದುಕೊಳ್ಳುವ ಅವಧಿಯನ್ನು ಹೊರತುಪಡಿಸಲಾಗಿದೆ. ಬಾಕಿ ಇರುವ ಪೂರ್ಣ ತೆರಿಗೆ ಮತ್ತು ಬಾಕಿ ಇರುವ ಬಡ್ಡಿ ಮತ್ತು ದಂಡದ ಶೇಕಡಾ 10ರಷ್ಟನ್ನು 31ನೇ ಮೇ 2017 ರ ಒಳಗೆ ಪಾವತಿಸಿದಲ್ಲಿ, ಇನ್ನುಳಿದ ಶೇಕಡಾ 90 ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅನುಕೂಲವಾಗುವಂತೆ ಕರಸಮಾಧಾನ ಯೋಜನೆಯನ್ನು ಜಾರಿಗೆ ತರಲಾಗಿದೆ. == ಬಜೆಟ್ ಪ್ರಸ್ತಾವನೆಗಳ ವಿವರ == == ರಚನೆಯಾಗುವ ಹೊಸ ತಾಲ್ಲೂಕುಗಳು == ೨೦೧೭ ೧೮ ರಲ್ಲಿ; ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ 21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳನ್ನು ಘೋಷಿಸಿದ್ದಾರೆ. ಹೊಸ ತಾಲೂಕುಗಳ ವಿವರ: ಈ ಊರುಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ರಾಜ್ಯ ಸರ್ಕಾರ ಘೋಷಿಸಿದೆ. == ದುಬಾರಿ ಮತ್ತು ಅಗ್ಗ == ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೆಲ ತೆರಿಗೆ ವಿನಾಯ್ತಿಗಳನ್ನು ಮುಂದುವರೆಸಿದ್ದಾರೆ. ಸರಕು ಸೇವಾ ತೆರಿಗೆ ಜಾರಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೋಧಿ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ಮುಂದುವರಿಸಲು ತೀರ್ಮಾನ. ಬಿಯರ್, ಫೆನ್ನಿ, ಲಿಕ್ಕರ್, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು. ಮದ್ಯದ ಮೇಲೆ ಹೆಚ್ಚುವರಿ ಅಬಕಾರಿ ಸುಂಕ. ಅಬಕಾರಿ ಶುಲ್ಕದಲ್ಲಿ ಹೆಚ್ಚಳ. ರಾಜ್ಯ ಅಬಕಾರಿ ಕಾಯ್ದೆಗೆ ತಿದ್ದುಪಡಿ. ರಾಜ್ಯದಲ್ಲಿ ನೀರಾ ನೀತಿ ಜಾರಿ. ಇವು ದುಬಾರಿ 1 ಲಕ್ಷ ರೂ.ಗಿಂತ ಮೇಲ್ಪಟ್ಟ ದ್ವಿಚಕ್ರ ವಾಹನ ದ್ವಿಚಕ್ರ ವಾಹನಗಳ ಮೇಲಿನ ಶೇ.12ರಷ್ಟು ತೆರಿಗೆ ಶೇ.18ಕ್ಕೆ ಹೆಚ್ಚಳ ಮದ್ಯ ಮಾರಾಟ ಲೈಸೆನ್ಸ್ ಶುಲ್ಕದಲ್ಲಿ ಶೇ.25ರಷ್ಟು ಹೆಚ್ಚಳ ಇವು ಅಗ್ಗ ಬಿಯರ್, ಫೆನ್ನಿ, ವೈನ್ ಮೇಲಿನ ಮೌಲ್ಯ ವರ್ಧಿತ ತೆರಿಗೆ ರದ್ದು ಭತ್ತ, ಅಕ್ಕಿ, ಗೋಧಿ ಕಾಳು ಮೇಲೆ ತೆರಿಗೆ ವಿನಾಯ್ತಿ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 200ರೂ. ನಿಗದಿ ಏಪ್ರಿಲ್ 1ರಿಂದ ವ್ಯಾಟ್ ತೆರಿಗೆ ಇಲ್ಲದೆಯೇ ಮದ್ಯಮಾರಾಟ ನಡೆಯಲಿದೆ === ರಾಜ್ಯ ಆದಾಯಕ್ಕೆ ಭಾರಿ ಹೊಡೆತ === ಹಿಂದಿನ ವರ್ಷದಲ್ಲಿ ನಡೆದ ಸ್ಥಿರಾಸ್ತಿಗಳ ಮಾರಾಟ ಮತ್ತು ನೋಂದಣಿ ಸಂಖ್ಯೆಗಳನ್ನು ಆಧರಿಸಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಮುಂದಿನ ವರ್ಷಕ್ಕೆ ಆಸ್ತಿ ಮಾರಾಟ ಮತ್ತು ಶುಲ್ಕ ಸಂಗ್ರಹ ಗುರಿ ನಿಗದಿ ಮಾಡುವುದು ವಾಡಿಕೆ. ಅದರಂತೆ, ನೋಟು ರದ್ದಾದ ಮೂರು ತಿಂಗಳ ನಂತರದಲ್ಲಿ ಕನಿಷ್ಠ 4,65,108 (ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ನೋಂದಣಿಯಾಗಿದ್ದ ಆಸ್ತಿಗಳ ಸಂಖ್ಯೆ) ಸ್ಥಿರಾಸ್ತಿಗಳ ಮಾರಾಟ ಆಗುತ್ತದೆ ಎಂದು ಇಲಾಖೆ ಅಂದಾಜಿಸಿತ್ತು. ಆದರೆ, ಈ ಅವಧಿಯಲ್ಲಿ ನೋಂದಣಿಯಾದ ಆಸ್ತಿಗಳ ಸಂಖ್ಯೆ 3,52,377 ಎನ್ನುತ್ತವೆ ಇಲಾಖೆಯಲ್ಲಿನ ಅಂಕಿ-ಅಂಶ. ಇಲಾಖೆಯು ಮುದ್ರಾಂಕ ಮತ್ತು ನೋಂದಣಿ ಶುಲ್ಕ ರೂಪದಲ್ಲಿ ರೂ.2,444 ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ ರೂ. 1,835.23 ಕೋಟಿ. ಇದೇ ರೀತಿ ನಗರದ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಇದೇ ಅವಧಿ (2016 ನವೆಂಬರ್‌ನಿಂದ 2017 ಜನವರಿ)ಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 95,679 ಆಸ್ತಿಗಳ ನೋಂದಣಿಯ ನಿರೀಕ್ಷೆ ಹಾಕಿಕೊಳ್ಳಲಾಗಿತ್ತು. ಆದರೆ, ಕೇವಲ 82,640 ಆಸ್ತಿಗಳು ನೋಂದಣಿಯಾದವು. ಬೆಂಗಳೂರಿನಲ್ಲಿ ಇಲಾಖೆಯು ಈ ಅವಧಿಯಲ್ಲಿ ರೂ.1,611.43 ಕೋಟಿ ಆದಾಯ ಸಂಗ್ರಹ ಗುರಿ ಹಾಕಿಕೊಂಡಿತ್ತು. ಆದರೆ, ಸಂಗ್ರಹವಾದ ಮೊತ್ತ ರೂ.1,317.53 ಕೋಟಿ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಈ ಮೂರು ತಿಂಗಳಲ್ಲಿ ನೋಂದಣಿಯಾದ ಆಸ್ತಿಗಳಲ್ಲಿ ಬಹುತೇಕ ನೋಟು ರದ್ಧತಿಗೂ ಮೊದಲೇ ಒಪ್ಪಂದ ಆಗಿದ್ದ ಆಸ್ತಿಗಳಾಗಿದ್ದವು. ‘ಮಾರ್ಚ್ ಬಳಿಕ ಆಸ್ತಿಗಳ ಮಾರಾಟ ಮತ್ತಷ್ಟು ಪ್ರಮಾಣದಲ್ಲಿ ಕುಸಿಯಲಿದ್ದು, ರಾಜ್ಯ ಸರ್ಕಾರಕ್ಕೆ ಈ ವರ್ಷಾಂತ್ಯದಲ್ಲಿ ಕನಿಷ್ಠ ರೂ.3000 ಕೋಟಿ ಆದಾಯ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ಹೆಸರು ಬಹಿರಂಗ ಪಡಿಸಿಕೊಳ್ಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ಅಪಾರ್ಟ್‌ಮೆಂಟ್ ಕೊಳ್ಳುವವರಿಲ್ಲ: ಇನ್ನು ಕನಿಷ್ಠ ಎರಡು ವರ್ಷ ವಸತಿ ನಿವೇಶನಗಳು, ಕೃಷಿ ಭೂಮಿ ಮತ್ತು ಅಪಾರ್ಟ್‌ಮೆಂಟ್‌ಗಳ ಮಾರಾಟ ಮತ್ತು ಮರುಮಾರಾಟ ಪ್ರಕ್ರಿಯೆ ಚೇತರಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ಅವರು. ==== ಕಳೆದ ವರ್ಷದ (ರಾಜ್ಯ)ಅಂಕಿ ಅಂಶ ನವೆಂಬರ್ 2015 ರಿಂದ ಫೆ. 6, 2016ವರೆಗೆ ==== 14 , 2017 2016-17ರಲ್ಲಿ 2017 ಫೆ. 17ರ ವರೆಗೆ ರಾಜ್ಯದಲ್ಲಿ ನೋದಣಿಯಾದ ಆಸ್ತಿ ಮತ್ತು ಸಂಗ್ರಹಿತ ಶುಲ್ಕ 5,07,625 ನೋಂದಣಿಯಾದ ಆಸ್ತಿ ಸಂಖ್ಯೆ ರೂ.1,959 ಕೋಟಿ ಸಂಗ್ರಹಿತ ಶುಲ್ಕ == ಬಜೆಟ್ ಸಾರಾಂಶ == ರೂ.1,86,561 ಕೋಟಿ ಮೊತ್ತದ ಬಜೆಟ್‌ನಲ್ಲಿ ಯೋಜನೆ ಮತ್ತು ಯೋಜನೇತರ ಎಂಬ ಪ್ರತ್ಯೇಕ ವಿಭಜನೆ ಮಾಡಿಲ್ಲ. ಕಳೆದ ಬಜೆಟ್‌ಗೆ ಹೋಲಿಸಿದರೆ ಬಜೆಟ್‌ ಅಂದಾಜು ಮೊತ್ತ ಶೇ 14.16ರಷ್ಟು ಹೆಚ್ಚಳವಾಗಿದೆ. ವಿವಿಧ ಮೂಲಗಳಿಂದ ರೂ.1,44,892 ಕೋಟಿ ರಾಜಸ್ವ ಜಮೆಯನ್ನು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರದ ಸಾಲ: 2016–17ರ ಅಂತ್ಯಕ್ಕೆ ರೂ.2.08 ಲಕ್ಷ ಕೋಟಿ * 2017–18ರ ಅಂತ್ಯಕ್ಕೆ ರೂ.2.42 ಲಕ್ಷ ಕೋಟಿ === ಆದಾಯ === === ಮುಖ್ಯ ಹಂಚಿಕೆಗಳು === == ರಾಜ್ಯ ಜಿಡಿಪಿ ಶೇ 6.9ಕ್ಕೆ ಕುಸಿತ == ಪ್ರಜಾವಾಣಿ;16 , 2017 ಬರ, ನೋಟು ರದ್ದತಿ ಪರಿಣಾಮ * ಕೈಗಾರಿಕೆ, ಸೇವಾ ವಲಯದ ಪ್ರಗತಿ ಕುಂಠಿತ. ಎರಡು ವರ್ಷಗಳಿಂದ ನಿರಂತರ ಬರಗಾಲ ಮತ್ತು ನೋಟು ರದ್ದತಿಯ ಪರಿಣಾಮ 2016–17ನೇ ಸಾಲಿನ ರಾಜ್ಯದ ಆರ್ಥಿಕ ಪ್ರಗತಿ ಶೇ 0.4ರಷ್ಟು ಕುಸಿಯಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. 2015–16ರಲ್ಲಿ ಶೇ 7.3ರಷ್ಟಿದ್ದ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) 2016–17ರಲ್ಲಿ ಶೇ 6.9ಕ್ಕೆ ಕುಸಿಯುವ ಮೂಲಕ ₹8,71,995 ಕೋಟಿಗೆ ತಲುಪುವ ಮುನ್ಸೂಚನೆ ಇದೆ. ಕೈಗಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಂಠಿತಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸಮೀಕ್ಷೆ ಹೇಳಿದೆ. ನೋಟು ರದ್ದತಿಯಿಂದ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿದ್ದು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹದಿಂದ ನಷ್ಟ ತುಂಬಿಕೊಳ್ಳಲಾಗಿದೆ. ಆ ಮೂಲಕ ರಾಜ್ಯದ ಆರ್ಥಿಕ ವ್ಯವಸ್ಥೆ ಹಳಿ ತಪ್ಪದಂತೆ ಎಚ್ಚರ ವಹಿಸಲಾಗಿದೆ ಎಂದು ಸಮೀಕ್ಷೆ ಹೇಳಿದೆ. ವಿತ್ತೀಯ ಕೊರತೆಯ ನಿಯಂತ್ರಣ: ಸದ್ಯಕ್ಕೆ ರಾಜ್ಯದ ಆರ್ಥಿಕ ಸ್ಥಿತಿ ಬಲಿಷ್ಠ ಮತ್ತು ಸ್ಥಿರವಾಗಿದ್ದು ವಿತ್ತೀಯ ನಿರ್ವಹಣೆ ಸಮರ್ಪಕವಾಗಿದೆ. ವಿತ್ತೀಯ ಕೊರತೆ ಶೇ 2.79 ರಿಂದ ಶೇ 2.12ಕ್ಕೆ ಇಳಿಯಲಿದೆ. ತೆರಿಗೆ ಸಂಗ್ರಹ ವಿಷಯದಲ್ಲಿ ರಾಜ್ಯ ಉತ್ತಮ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಸಾಲಿನಲ್ಲಿ ಶೇ 4.9ರಷ್ಟಿದ್ದ ಕೈಗಾರಿಕಾ ಪ್ರಗತಿಯು ಪ್ರಸಕ್ತ ವರ್ಷ ಶೇ 2.2ಕ್ಕೆ ಮತ್ತು ಅದೇ ರೀತಿ ಸೇವಾ ವಲಯ ಶೇ 10.4 ರಿಂದ ಶೇ 8.5ಕ್ಕೂ ಕುಸಿಯುವ ನಿರೀಕ್ಷೆ ಇದೆ. ಗಣಿಗಾರಿಕೆ, ನಿರ್ಮಾಣ, ವಿದ್ಯುತ್‌, ಅನಿಲ, ತಯಾರಿಕಾ ವಲಯದ ಬೆಳವಣಿಗೆ ದರ ಶೇ 2.2ಕ್ಕೆ ಇಳಿಯಲಿದೆ. === ಆಹಾರಧಾನ್ಯ ಉತ್ಪಾದನೆ ಕುಂಠಿತ === ಈ ವರ್ಷವೂ ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ್ದು, ಆಹಾರಧಾನ್ಯಗಳ ಉತ್ಪಾದನೆ 96.44 ಲಕ್ಷ ಟನ್‌ಗಳಿಂದ 91.54 ಲಕ್ಷ ಟನ್‌ಗಳಿಗೆ ಇಳಿಯುವ ಸಾಧ್ಯತೆ ಇದೆ. ಆದರೆ, ಕೃಷಿ ವಲಯ ಶೇ 1.5ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದ್ದು, ತೊಗರಿ, ತರಕಾರಿ ಮತ್ತು ಹಣ್ಣುಗಳ ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ. === ಎಫ್.ಡಿ.ಎ. === 2015–16ರಲ್ಲಿ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಶೇ 10.30ರಷ್ಟು ಬಂಡವಾಳ ಪಡೆದುಕೊಳ್ಳಲು ಸಫಲವಾಗಿದೆ. 2015–16ರಲ್ಲಿ ಸಾಫ್ಟ್‌ವೇರ್ ಸೇವಾ ವಲಯದಲ್ಲಿ ಒಟ್ಟು ರೂ.3,25,414 ಕೋಟಿ ರಫ್ತು ಮಾಡುವ ಮೂಲಕ ಕರ್ನಾಟಕ (ಶೇ 36.96) ಅಗ್ರ ಸ್ಥಾನದಲ್ಲಿದೆ. ರಫ್ತು ವಹಿವಾಟಿಗೆ ಕರ್ನಾಟಕ ರೂ.2.20ಲಕ್ಷ ಕೋಟಿ ಕೊಡುಗೆ ನೀಡಿದೆ. ರಾಜ್ಯದ ಒಟ್ಟು ಜಿಡಿಪಿಗೆ ಸಾಫ್ಟ್‌ವೇರ್‌ ಉದ್ಯಮ ಶೇ 25ಕ್ಕೂ ಹೆಚ್ಚಿನ ಕೊಡುಗೆ ನೀಡುತ್ತಿದೆ. === ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) (ಕೋಟಿ ರೂ.ಗಳಲ್ಲಿ) === 6.9 % 2016–17ರಲ್ಲಿ ರಾಜ್ಯದ ಜಿಡಿಪಿ ಅಂದಾಜು 0.4%ರಷ್ಟು ಕುಸಿತ 7.3% 2014–15ರಲ್ಲಿನ ರಾಜ್ಯದ ಜಿಡಿಪಿ === ಕೈಗಾರಿಕಾ ಸೂಚ್ಯಂಕ === 185.79 2015–16ರಲ್ಲಿ ಕೈಗಾರಿಕಾ ಪ್ರಗತಿ 182.46 2014–15ರಲ್ಲಿ ಕೈಗಾರಿಕಾ ಪ್ರಗತಿ === ರಾಜ್ಯದ ಚಿತ್ರಣ === ಶೇ 14.91 ರಾಜ್ಯದಲ್ಲಿ ಮಹಿಳಾ ಪ್ರಧಾನ ಕುಟುಂಬ 0–6ವರ್ಷದ ವಯಸ್ಸಿನ ಮಕ್ಕಳ ಸಂಖ್ಯೆ ಶೇ 2.30ರಷ್ಟು ಕಡಿಮೆ ಉದ್ಯೋಗ ಸೃಷ್ಟಿ ಮುಂಚೂಣಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ 10 ಲಕ್ಷ ಜನರಿಗೆ ನೇರ ಮತ್ತು 30 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ರಾಷ್ಟ್ರದ ಸರಾಸರಿಗಿಂತ ರಾಜ್ಯದ ಸಾಕ್ಷರತಾ ಪ್ರಮಾಣದಲ್ಲಿ ಹೆಚ್ಚಳ ನಿರುದ್ಯೋಗ ದರ ಶೇ 1.4. ದೇಶದ ಸರಾಸರಿಗಿಂತಲೂ ಕಡಿಮೆ ಸಾಕ್ಷರತೆ ಪಟ್ಟಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ == ಸರ್ಕಾರದ ಆಎಳಿತ ವೆಚ್ಚ ಲೇಖಾನುದಾನಕ್ಕೆ ಸದನದ ಒಪ್ಪಿಗೆ == 29 , 2017 ಇದೇ ವರ್ಷದ ಜುಲೈವರೆಗೆ ವಿವಿಧ ಇಲಾಖೆಗಳಲ್ಲಿ ಖರ್ಚು ಮಾಡಬೇಕಾದ ಒಟ್ಟು ₹48,729 ಕೋಟಿ ಮೊತ್ತದ ಲೇಖಾನುದಾನಕ್ಕೆ ವಿಧಾನಮಂಡಲದ ಉಭಯ ಸದನಗಳು ಮಂಗಳವಾರ ಒಪ್ಪಿಗೆ ನೀಡಿವೆ. ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ ಬಳಿಕ 4 ತಿಂಗಳ ವೆಚ್ಚಕ್ಕೆ ಸಂಬಂಧಿಸಿದ ಧನ ವಿನಿಯೋಗ ಮಸೂದೆ ಅಂಗೀಕಾರವಾಯಿತು. ಇದಲ್ಲದೇ, ಬಜೆಟ್‌ನಲ್ಲಿ ಪ್ರಸ್ತಾಪಿಸಿದ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮದ್ಯದ ಮೇಲೆ ತೆರಿಗೆ ಹಾಗೂ ವಾಹನ ನೋಂದಣಿ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳಿಗೆ ಸದನದ ಒಪ್ಪಿಗೆ ಪಡೆಯಲಾಯಿತು.ರೂ.48,729 ಕೋಟಿ ಮೊತ್ತದ ಲೇಖಾನುದಾನಕ್ಕೆ ಒಪ್ಪಿಗೆ;ಪ್ರಜಾವಾಣಿ ವಾರ್ತೆ;29 , 2017==ಬೆಂಗಳೂರು ಜಿಲ್ಲೆ ಸಾಲ ನೀಡಿಕೆ ಯೋಜನೆ==*ಬೆಂಗಳೂರು: 2017–18ನೇ ಸಾಲಿಗೆ ಜಿಲ್ಲೆಯ ಬ್ಯಾಂಕುಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಕೆನರಾ ಬ್ಯಾಂಕ್ ರೂ. 1.15 ಲಕ್ಷ ಕೋಟಿ ಸಾಲ ಯೋಜನೆಯನ್ನು ಸಿದ್ಧಪಡಿಸಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌. ಮಂಜುಶ್ರೀ ಅವರು ಮಂಗಳವಾರ ಜಿಲ್ಲಾ ಸಾಲ ಯೋಜನೆ ವಿವರಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿದರು.*‘ನಗರದಲ್ಲಿಯೇ ಅತಿ ಹೆಚ್ಚು ಶಾಲಾ, ಕಾಲೇಜುಗಳಿವೆ. ಆದರೂ, ಇಲ್ಲಿ ಶೈಕ್ಷಣಿಕ ಸಾಧನೆ ಕಡಿಮೆ. ಹಾಗಾಗಿ ಈ ಬಾರಿ ಸಾಲ ಯೋಜನೆಯಲ್ಲಿ ಶಿಕ್ಷಣ ಕ್ಷೇತ್ರ ಹೆಚ್ಚು ಒತ್ತು ನೀಡಲಾಗಿದ್ದು, ರೂ.1,150 ಕೋಟಿ ಮೀಸಲಿರಿಸಲಾಗಿದೆ’ ಎಂದು ತಿಳಿಸಿದರುಪುಸ್ತಕ ಬಿಡುಗಡೆ;;ರೂ. 1.15 ಲಕ್ಷ ಕೋಟಿ ಸಾಲ ಯೋಜನೆ;29 , 2017 == ನೋಡಿ == ಕರ್ನಾಟಕ ಸರ್ಕಾರದ ಮುಂಗಡ ಪತ್ರ-2015-2016 ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೧೬-೧೭ == ಹೊರ ಸಂಪರ್ಕ == ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಸಂಬಳಕ್ಕೂ ಸಾಕಾಗದು;ಬಿ. ಶ್ರೀಪಾದ ಭಟ್;16 , 2017 ಬಜೆಟ್‌: ವಿಶ್ಲೇಷಣೆ;ಆದ್ಯತಾ ಕ್ಷೇತ್ರಗಳಿಗೆ ಈ ಬಾರಿಯೂ ಸಿಕ್ಕಿದೆ ಹೆಚ್ಚಿನ ಪ್ರಾತಿನಿಧ್ಯ;ಪ್ರಣಯ್ ಕೋಟಸ್ಥಾನೆ;16 , 2017 ರೈತರ ಯೋಗಕ್ಷೇಮ: ಈ ಬಾರಿಯ ಬಜೆಟ್‌ನಲ್ಲಿಯೂ ಅನುದಾನದ ಕೊರತೆ;ಪ್ರೊ.ಎಂ.ಮಹದೇವಪ್ಪ;16 , 2017 ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ಸಂಬಳಕ್ಕೂ ಸಾಕಾಗದು;ಬಿ. ಶ್ರೀಪಾದ ಭಟ್;16 , 2017 [೧] 2017-04-26 ವೇಬ್ಯಾಕ್ ಮೆಷಿನ್ ನಲ್ಲಿ. ಪದ್ಮರಾಜ ದಂಡಾವತಿ;ಇದು ಬಳಸಿಕೊಂಡ ಅವಕಾಶವೇ ಅಥವಾ...?;19 , 2017 2017-03-18 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖ ==